UK Express Logo

ದಾಂಡೇಲಿಗರಿಗೆ ಸಿಹಿ ಸುದ್ದಿ - ಅಳ್ನಾವರ ಮತ್ತು ದಾಂಡೇಲಿ ನಡುವೆ ಮತ್ತೆ ಹಳಿ ಏರಲಿದೆ ರೈಲು

By UKExpress on 12/10/2025
Featured Image ದಾಂಡೇಲಿ: ಪ್ರವಾಸಿಗರು ಮತ್ತು ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದ್ದ ಅಳ್ನಾವರ-ದಾಂಡೇಲಿ ರೈಲು ಸೇವೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ರೈಲ್ವೆ ಸಚಿವಾಲಯವು ಅಳ್ನಾವರ ಮತ್ತು ದಾಂಡೇಲಿ ನಡುವೆ DEMU (ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲು ಸೇವೆಯನ್ನು ಪುನರಾರಂಭಿಸಲು ಅಧಿಕೃತವಾಗಿ ಅನುಮೋದನೆ ನೀಡಿದೆ.

ಈ ರೈಲು ಭಾನುವಾರವನ್ನು ಹೊರತುಪಡಿಸಿ ವಾರದ 6 ದಿನಗಳ ಕಾಲ ಸಂಚರಿಸಲಿದ್ದು, ಪ್ರತಿದಿನ 3 ಬಾರಿ ಓಡಾಟ ನಡೆಸಲಿದೆ. ಇದರಿಂದಾಗಿ ಉತ್ತರ ಕನ್ನಡದ ಪ್ರಮುಖ ಪ್ರವಾಸಿ ತಾಣವಾದ ದಾಂಡೇಲಿಗೆ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.

ರೈಲು ವೇಳಾಪಟ್ಟಿ ಈ ಕೆಳಗಿನಂತಿದೆ: ಅಳ್ನಾವರದಿಂದ ದಾಂಡೇಲಿಗೆ (Alnawar - Dandeli)

  • ಬೆಳಗಿನ ಸಂಚಾರ (76501): ಬೆಳಿಗ್ಗೆ 05:30ಕ್ಕೆ ಹೊರಟು -> 06:15ಕ್ಕೆ ತಲುಪಲಿದೆ.
  • ಮಧ್ಯಾಹ್ನ ಸಂಚಾರ (76503): ಬೆಳಿಗ್ಗೆ 07:40ಕ್ಕೆ ಹೊರಟು -> 08:25ಕ್ಕೆ ತಲುಪಲಿದೆ.
  • ಸಂಜೆಯ ಸಂಚಾರ (76505): ಸಂಜೆ 07:30ಕ್ಕೆ (19:30) ಹೊರಟು -> ರಾತ್ರಿ 08:15ಕ್ಕೆ (20:15) ತಲುಪಲಿದೆ.

ದಾಂಡೇಲಿಯಿಂದ ಅಳ್ನಾವರಕ್ಕೆ (Dandeli -Alnawar)

  • ಬೆಳಗಿನ ಸಂಚಾರ (76502): ಬೆಳಿಗ್ಗೆ 06:45ಕ್ಕೆ ಹೊರಟು -> 07:30ಕ್ಕೆ ತಲುಪಲಿದೆ.
  • ಮಧ್ಯಾಹ್ನ ಸಂಚಾರ (76504): ಬೆಳಿಗ್ಗೆ 08:40ಕ್ಕೆ ಹೊರಟು -> 09:25ಕ್ಕೆ ತಲುಪಲಿದೆ.
  • ಸಂಜೆಯ ಸಂಚಾರ (76506): ರಾತ್ರಿ 08:30ಕ್ಕೆ (20:30) ಹೊರಟು -> 09:15ಕ್ಕೆ (21:15) ತಲುಪಲಿದೆ.

ರೈಲ್ವೆ ಇಲಾಖೆಯ ಆದೇಶದಂತೆ, ಈ ಸೇವೆಯು ಅತೀ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಕಚೇರಿ ಕೆಲಸಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗರಿಗೆ ಈ ರೈಲು ಸೇವೆ ವರದಾನವಾಗಲಿದೆ.