ಶಿರಸಿ: ಕಾನೂನು ಮಹಾವಿದ್ಯಾಲಯಗಳ ಒಕ್ಕೂಟದ ವತಿಯಿಂದ ಶುಕ್ರವಾರ (ಡಿ.5) ನಡೆದ 9ನೇ ಅಥ್ಲೆಟಿಕ್ಸ್ ಟ್ರಯಲ್ಸ್‌ನಲ್ಲಿ ಶಿರಸಿಯ ಕಾನೂನು ಮಹಾವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿನಿ ಪ್ರಿಯಾಂಕಾ ಹೆಗಡೆ ಅದ್ಭುತ ಸಾಧನೆಗೈದಿದ್ದಾರೆ.
ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ, ಹೈಜಂಪ್ (High Jump), ಟ್ರಿಪಲ್ ಜಂಪ್ (Triple Jump) ಹಾಗೂ ರಿಲೇ (Relay) ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಈ ಮೂಲಕ ಕ್ರೀಡಾಕೂಟದ 'ಗೋಲ್ಡನ್ ಗರ್ಲ್' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿನಿಯ ಈ ಬಹುಮುಖ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
